ಮನುಷ್ಯ ಅಂದ ಮೇಲೆ ಇದ್ದೇ ಇರುತ್ತೆ ಒಂದು ಖಾಯಿಲೆ
ಹುಟ್ಟುತಾನೆ ಎಲ್ಲರಿಗು ಇರೊ ಖಾಯಿಲೆ ನಾಲಿಗೆ
ಉಳಿಸ್ರೊ ಮಾತು ನಾಳೆಗೆ
ಹಾಕ್ರೊ ಲಗಾಮ್ ಬಾಯಿಗೆ
ಬೊಬ್ಬೆ ಹೊಡ್ಕೊಂಡ್ ಕಾಲ ಕಳೆದು
ತಿಂತೀರಾ ಎನ್ರೊ ನಾಳೆಗೆ
ಕಾರಣ ಇದ್ರು ಇಲ್ದೆ ಇದ್ರು
ನಿಲ್ತೀರಲ್ರೊ ಮಾತಿಗೆ
ಗಂಟೆಗಟ್ಲೆ ಬಿಗ್ ಬಾಸ್ ಚರ್ಚೆ
ನೀವು ಯಾವಾಗ ಹೋಗೋದು ಅಲ್ಲಿಗೆ?
ಟಿವಿ ಮುಂದೆ ದಿನ ಕಳೆದು
ಹುಡ್ಗೀರ್ ಜೊತೆ ಮೀಟರ್ ಹೊಡೆದು
ಅಮ್ಮ ಹೇಳಿದ್ ಕೆಲಸ ಮಾಡದೆ
ಅಪ್ಪ ಕಟ್ಟಿದ್ ಫೀಸ್ ಗೆ ಓದದೆ
ಮಾಸ್ಟರ್ ಹೇಳಿದ್ ಪಾಠ ಕೇಳದೆ
ಎಕ್ಸಾಮ್ ಮೈಕ್ರೊ ಜೆರಾಕ್ಸ್ ಹೊಡೆದು
ನಕಲಿ ಪಕಲಿ ಪಾಸ್ ಆಗಿ ಹೋಗಿ
ಬೆಂಗಳೂರ್ ಬಂದು ಕೆಲಸ ಸಿಗ್ದೆ
10 ಸಾವಿರಕ್ಕೆ ಕೈ ಚಾಚೊದ್
ಸಾಧನೆ ಏನೊ ಬಾಳಲಿ?
ಮಾತಾಡ್ ಕಮ್ಮಿ, ಕೆಲಸ ಜಾಸ್ತಿ
ಕಲಿಯೋ ನೀನು ಶಶಶಶಶಶ!!!!!! ಮೌನ
ಕಾಲ ಯಾರದು ಹಿಡಿಬೇಡ
ಸಲಾಮ್ ಯಾರಿಗು ಹೊಡಿಬೇಡ
ಸಮಯ ನಿಂದೆ ದುನಿಯಾ ನಿಂದೆ
ಅನ್ನೋದು ಮಾತ್ರ ಮರೀಬೇಡ
ನಿನ್ನ ಲೈಫ್ ಗೆ ನೀನೆ ಹೀರೊ
ಹುಡ್ಗೀರ್ ಹಿಂದೆ ಬಿದ್ರೆ ಜೀರೊ
ವಿಲನ್ ಇಲ್ಲದ್ ಲೈಫ್ ಬೋರ್
ಇದ್ರೆ ವಿಲನ್ ಲೈಫ್ ಗೋಳು
ಬಿಡ್ತಾರೆ ಹಂಗೆ ಎಲ್ಲ ಓಳು
ಕೊಡ್ತಾರೆ ಬಿಟ್ಟಿ ಸಲಹೆ ನೂರು
ಬೇಕಾದ್ ಆಗ್ಲಿ ಬಿಡ್ತಾರ ಊರು
ಇಂಥವರೆಲ್ಲಾ ಬೇಕಾ ಗುರು
ಪೋಸ್ ಹೊಡಿಯೋರ್ ನೆ ನಂಬೇಡ
ಯಾರ್ ಏನ್ ಜಾಸ್ತಿ ಕಿತ್ತಿಲ್ಲ
ಮಾತಾಡ್ ಕಮ್ಮಿ ಕೆಲಸ ಜಾಸ್ತಿ
ಕಲಿಯೊ ನೀನು ಶಶಶಶಶ!!!!!!!! ಮೌನ